ಮನದಾಳದ ಮಾತನ್ನು ಹೇಳಲೇ?
ಇನಿಯಾ, ನೀನಿಲ್ಲದೆ ಮನೆಯೆಲ್ಲ ಖಾಲಿ
ಮನವೆಲ್ಲ ನಿನ್ನದೇ ಖಯಾಲಿ. ||
ಮುಂಜಾವಿನ ಹೊನ್ನಿನ ಕಿರಣ
ಬೀಳೆ ನೆನಪಾಗುವುದು ನಿನ್ನ ಚುಂಬನ|
ಹಕ್ಕಿಗಳ ಚಿಲಿಪಿಲಿ ಕಲರವ
ಕಿವಿ ಕಾತರಿಸುವುದು ನಿನ್ನ ಪಿಸುಮಾತಿನ ರವ ||
ಹೂವು ಬೀರಿದ ಕಂಪು
ಮರೆಯಗೊಡದು ನಿನ್ನ ನೆನಪು|
ಹೊರಗೆ ತಂಪು ಗಾಳಿ ಬೀಸುತಿರೆ
ನಿನ್ನ ಒಲವ ಧಾರೆ ಕಾಡುತಿರೆ||
ಆಗಸದಿ ಚೆಲ್ಲಿಹುದು ತಾರೆಗಳ ಕಾಂತಿ
ಕಂಡಿದ್ದೆ ನಿನ್ನ ನಯನ ತುಂಬ ಪ್ರೀತಿ|
ಮುಗ್ಧ ಕಂದನ ಮುದ್ದು ಕೇಕೆ
ನೆನಪಿಸುವುದು ನಿನ್ನ ನಗುವ ರೇಖೆ
ನಿನ್ನ ನೆನಪು ಮತ್ತೆ ಮತ್ತೆ ಕಾಡುತಿದೆ ,ಹೀಗೇಕೆ?||
11 comments:
ಪಾವ್ಸ್...
ಮನದಲ್ಲಿ..
ಹೃದಯ
ಭಾವದಲ್ಲಿ..
ನನ್ನ
ನಗುವಲ್ಲಿ..
ಬಂದು ಬಿಡುವೆಯಲ್ಲಾ
ಗೆಳೆಯಾ..
ಸುಂದರ
ನೆನಪಿನ..
ಕ್ಷಣಗಳಲ್ಲಿ..
ಎಷ್ಟು ಚೆನ್ನಾಗಿ ಬರೆಯುತ್ತೀರಲ್ಲ..!!
ನೀವು ಇನ್ನು ಮುಂದೆ ಕನ್ನಡದಲ್ಲೇ ಬರೆಯಿರಿ...
ಅಭಿನಂದನೆಗಳು.. ಚಂದದ ಕವನಕ್ಕೆ..
ತುಂಬ ಧನ್ಯವಾದಗಳು..ನಿಮ್ಮ ಪ್ರೋತ್ಸಾಹಕ್ಕೆ..:-)
ನೀವು ಬರೆದ ಸಾಲುಗಳು ಚೆನ್ನಾಗಿವೆ
ಪವನ ಭಾವನೆಗಳ ಆಳಕ್ಕೆ ಇಳಿದ ಅನುಭವದ ಮಾತು ಪದಗಳಾಗಿ ಹೊರಹೊಮ್ಮಿದ್ದು ಹೀಗೆಯೇ..??
ಚನ್ನಾಗಿದೆ ನಿಮ್ಮ ಕವನ-ಪವನ
pav,
Wow.. very lovely poem.. I liked it.. keep it coming
chennagi bardiddiya kane :)
ವ್ವಾವ್ ವಾವ್.....
ಕ್ಯಾ ಬಾತ್ ಹೈ!
ಸುಂದರ ಕವನ.............
ಪವನ ಮೇಡಂ,
ನಿಮ್ಮ ಕವಿತೆ ಚೆನ್ನಾಗಿದೆ
ಧನ್ಯವಾದಗಳು
ಧನ್ಯವಾದಗಳು ಅಜಾದ್ ಸರ್..
ಭಾವನೆಗಳೇ ಪದಗಳು ಆದದ್ದು ಇಲ್ಲಿ .:-)
thank u nivi for liking.
thanks ajay...
@ಮನದಾಳದಿಂದ : ಧನ್ಯವಾದಗಳು ಪ್ರೋತ್ಸಾಹಿಸಿದ್ದಕ್ಕೆ....
@ಕನಸು..ಧನ್ಯವಾದಗಳು ಓದಿದ್ದಕ್ಕೆ..:-)
good write up pavana..
well written kavana. nice one pavana...keep nwriting...
Post a Comment