ಈ ಬಾಳ ಯಾನದಲ್ಲಿ ನಾ ಪಯಣಿಸುತಿರುವಾಗ
ಉಬ್ಬರ ವಿಳಿತಗಳ ಜೊತೆ ಸಾಗುತಿರುವಾಗ
ನೀ ಬಂದೆ ಅನಿರೀಕ್ಷಿತವಾಗಿ
ಬಾಳಿಗೆ ಭರವ್ಸೆಯ ಸ್ನೇಹಿತನಾಗಿ

ಕಳೆದೆ ನಾನು ಅಮೂಲ್ಯ ಕ್ಷಣಗಳನ್ನು
ವರ್ಣಿಸಲಾರೆ ಈಗ ಆ ಆನಂದವನ್ನು
ಹತ್ತಿರವಾದೆ ನೀ ಈ ನನ್ನ ಮನಕೆ
ಶಾಶ್ವತವಾಗಿ ನಿನ್ನ ಜೊತೆಯಿರುವ ಬಯಕೆ

ಬಣ್ಣ ಬಣ್ಣದ ಈ ಕನಸಿನ ಲೋಕ
ನೀ ಆದೆ ಹೊಸ ಆಸೆಗಳಿಗೆ ಚಾಲಕ
ಆವರಿಸಿದೆ ನನ್ನ ದಿನದ ಪ್ರತಿ ಕ್ಷಣ
ಸರಸ ವಿರಸದ ಸಮಯಗಳ ಮಿಶ್ರಣ

ಬಂದೆ ಬಂತು ಆ ನಮ್ಮ ಅಗಲುವ ದಿನ
ನಿಯಂತ್ರಿಸಿದೆ ನಾ ನನ್ನ ಮನದ ಭಾವನ
ಕಾಡುತಿವೆ ನಿನ್ನ ನೆನಪುಗಳು ಅನುದಿನ
ಕಾಯುತಿರುವೆ ನಿನಗೆ….ಎಂದು ಪುನರ್ಮಿಲನ?